ಮುಧೋಳ: (KEA) ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಜೂ.27 ರಿಂದ ಸಿ.ಇ.ಟಿ (CET) ಡಾಕ್ಯೂಮೆಂಟ್ ವೆರಿಫಿಕೇಶನ್ ಪ್ರಾರಂಭಿಸುತ್ತಿದ್ದು, ಮುಧೋಳ ಸುತ್ತ ಮುತ್ತಲಿನ ವಿದ್ಯಾರ್ಥಿಗಳಿಗೊಸ್ಕರ ಡಾಕ್ಯೂಮೆಂಟ್ ವೆರಿಫಿಕೇಶನ್ ಸಂಬಂಧಿತ ಹೆಚ್ಚಿನ ವಿವರಗಳಿಗಾಗಿ ನಗರದ ಬಿಳೂರು ಗುರುಬಸವ ಮಹಾಸ್ವಾಮೀಜಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ (ಬಿಜಿಎಮ್‌ಐಟಿ) ಸಹಾಯ ಕೇಂದ್ರ ತೆರೆಯಲಾಗಿದೆ.
ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಪ್ರೊ.ರವಿ ಬಶೆಟ್ಟಿ (ಮೊ.9740429164), ಪ್ರೊ.ವಿನಯ ಶೆಟ್ಟರ (ಮೊ.9141201836) ಅವರನ್ನು ಸಂಪರ್ಕಿಸುವಂತೆ ಕಾಲೇಜಿನ ಪ್ರಾಂಶುಪಾಲ ಡಾ.ಶ್ರವಣಕುಮಾರ ಕೆರೂರು ಅವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.