ಬಾಗಲಕೋಟೆ: ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರು ಜೂ.3ರ ಶನಿವಾರದಿಂದ ನಾಲ್ಕು ದಿನಗಳ ಕಾಲ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಜೂ.3ರಂದು ಬೆಳಗಾವಿಯಿಂದ ಲೋಕಾಪುರಕ್ಕೆ ಬೆಳಗ್ಗೆ ಆಗಮಿಸಿವ ಅವರು 11 ಗಂಟೆಯವರೆಗೆ ಸಾರ್ವಜನಿಕ ಸಂಪರ್ಕ ಸಭೆಯಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 12 ರಿಂದ 2 ಗಂಟೆಯವರಗೆ ಮುಧೋಳದಲ್ಲಿ ನಡೆಯಲಿರುವ ಸಾರ್ವಜನಿಕ ಸಂಪರ್ಕ ಸಭೆಯಲ್ಲಿ ಭಾಗವಹಿಸುವರು.
ನಂತರ ಜೂ.4ರ ರವಿವಾರ ಮಾಲಾಪುರ, ಶಿರೋಳ, ಕುಳಲಿ ಮುಗಳಖೋಡ, ಬೆಳಗಲಿ, ಮಹಾಲಿಂಗಪುರ, ಜೂ.5ರ ಸೋಮವಾರ ಬುದ್ರಿ ಪಿಎಂ ಮಂಟೂರ, ಕಿಶೋರಿ, ಮಳ್ಳಿಗೇರಿ, ಹಲಗಲಿ, ವಜ್ಜರಮಟ್ಟಿ, ಜೂ.6ರ ಮಂಗಳವಾರ ರೂಗಿ, ಗುಲಗಾಲಜಂಬಗಿ, ಮೆಟ್ಟಗುಡ್ಡ, ಹಲಕಿ, ನಿಂಗಾಪುರ, ಬೊಮ್ಮನಬುದ್ದಿ ಗ್ರಾಮಗಳಲ್ಲಿ ಸಾರ್ವಜನಿಕ ಸಂಪರ್ಕ ಸಭೆಗಳಲ್ಲಿ ಭಾಗಿಯಾಗಲಿದ್ದಾರೆ.