ಮುಧೋಳ : ನಗರದ ದಾನಮ್ಮದೇವಿ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಿಳಾ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿನಿಯರು ಸ್ವಾವಲಂಬಿ ಬದುಕು ಸಾಗಿಸಲು ಮತ್ತು ಮಾರಾಟದ ಕೌಶಲ್ಯ ಜೊತೆಗೆ ಸ್ವ-ಉದ್ಯೋಗ, ವ್ಯವಹಾರಿಕಜ್ಞಾನ ತಿಳಿದುಕೊಳ್ಳುವ ಉದ್ದೇಶದಿಂದಾಗಿ ದಿನಾಂಕ 19 ರಿಂದ 24 ರವರೆಗೆ ವಾಣಿಜ್ಯ ವಿಭಾಗದವತಿಯಿಂದ “ಕಾಮರ್ಸ್ ಫೆಸ್ಟ್ ಸ್ಪಿರಿಟ್-2ಏ23” ಒಂದು ವಾರದೂದ್ದಕ್ಕೂ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ.
ಉದ್ಘಾಟನೆಯನ್ನು ನಿವೃತ್ತ ಪ್ರೊ. ಎ. ಐ. ಗಂಗಣ್ಣವರ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ. ಎಮ್.ಆರ್.ಜರಕುಂಟಿ ಹಾಗೂ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಪ್ರೊ. ಎಂ. ಎಂ. ಹಿರೇಮಠ ವಹಿಸಿಕೊಳ್ಳಲಿದ್ದಾರೆ. ವಿದ್ಯಾರ್ಥಿನಿಯರಿಗಾಗಿ ದಿನಾಂಕ 19 ರಿಂದ 24 ರವರೆಗೆಐಸ್- ಬ್ರೇಕಿಂಗ್ ಇನ್ಸಾ ಲೇಶನ್, ಉತ್ಪನ್ನ ಮಾರಾಟ, ನಿರ್ವಹಣಾ ಮೌಖಿಕ ಮತ್ತು ಲಿಖಿತ ಸ್ಪರ್ಧೆ, ಬೆಸ್ಟ್ ಇವೆಂಟ್ ಮ್ಯಾನೇಜೆಂಟ್, ಪಿಪಿಟಿ ಪ್ರಸೆಂಟೇಶನ್ ಹಾಗೂ ರೆಟ್ರೋಡ್ಯಾನ್ಸ್ ಸ್ಪರ್ಧಾ ಕಾರ್ಯಕ್ರಮಗಳು ಜರುಗಲಿವೆ.
ದಿನಾಂಕ 24-ರಂದು 12-30 ಗಂಟೆಗೆ ಮುಕ್ತಾಯ ಸಮಾರಂಭದ ಮುಖ್ಯ ಅತಿಥಿಗಳಾಗಿ ಡಾ. ಡಿ.ಆರ್. ಭೂತಡಾ ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಎಲ್ಲರೂ ಉಪಸ್ಥಿತರಿರಬೇಕೆಂದು ಸಂಯೋಜಕರಾದ ಪ್ರೊ ಎ. ಎನ್. ಬಾಗೇವಾಡಿ ತಿಳಿಸಿದ್ದಾರೆ.