ಮುಧೋಳ: ಬಸ್‌ಗಳ ಕೊರತೆ, ಸಮರ್ಪಕ ಸೇವೆಗೆ ಆಗ್ರಹ


ಸರ್ಕಾರದ ನೂತನ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ಜಾರಿಗೆ ಬಂದಾಗಿನಿಂದ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವುದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಾಲೆ-ಕಾಲೇಜುಗಳಿಗೆ ಹೋಗಿ-ಬರಲು ಬಹಳ ತೊಂದರೆ ಆಗುತ್ತಿದೆ.

ಇದನ್ನು ಸರಿಪಡಿಸಬೇಕೆಂದು ಒತ್ತಾಯಿಸಿ ಎಬಿವಿಪಿ ಸಂಘಟನೆ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಿ ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಬಸ್‌ಗಳ ಕೊರತೆಯಿಂದಾಗಿ ಈಗಿದ್ದ ಬಸ್‌ಗಳಿಗೆ ಪ್ರಯಾಣಿಕರ ಸಂಖ್ಯೆ ಹೆಚ್ಚಳದಿಂದ ಸಮಯಕ್ಕೆ ಸರಿಯಾಗಿ ಬಸ್‌ಗಳು ಸಿಗದೆ ತರಗತಿಗಳಿಗೆ ಹಾಜರಾಗಲು ತೊಂದರೆ ಆಗುತ್ತಿದ್ದು, ಈ ಕೂಡಲೇ ಹೆಚ್ಚಿನ ಬಸ್‌ಗಳನ್ನು ಬಿಡಬೇಕೆಂದು ವಿದ್ಯಾಥಿಗಳು ಒತ್ತಾಯಿಸಿದರು.

ನಗರದ ಆರ್.ಎಂ.ಜಿಕಾಲೇಜಿನ ಆವರಣದಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ಮಾರ್ಗವಾಗಿ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ನಿರ್ಮಿಸಿ ಮಾರ್ಗ ಮಧ್ಯೆ ಸಾಂಕೇತಿಕವಾಗಿ ರಸ್ತೆತಡೆ ನಡೆಸಿ ಮಾನವ ಸರಪಳಿ ನಿರ್ಮಿಸಿದರು.

ನಂತರ ಬಸ್ ಡಿಪೋ ಮ್ಯಾನೇಜರ್ ಜಿ.ಎಸ್.ಬಿರಾದಾರ ಹಾಗೂ ಉಪ ತಹಸೀಲ್ದಾರ್ ಶ್ರೀಶೈಲ ಘಾಟಣಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಸಿಪಿಐ ಅಯ್ಯನಗೌಡ ಪಾಟೀಲ, ಮಮದಾಪೂರ ಮುಂತಾದವರು ಇದ್ದರು.
ನವೀನ ಹಳೆಯದು