ಕೃಷಿ ಕುಟುಂಬದಲ್ಲಿ ಜನಿಸಿದ ವಿನಯ್ ಅಶೋಕ ಕಂಕಣವಾಡಿ 20 ವರ್ಷದ ಯುವಕ. ಸ್ಥಳಿಯ ಕುಮಕಾಲೆ ಡಿಗ್ರಿ ಕಾಲೇಜಿನ ಬಿ.ಕಾಂ, ವಿದ್ಯಾರ್ಥಿ.
ಚಿಕ್ಕವನಿದ್ದಾಗಿನಿಂದಲೇ ದೇಶಭಕ್ತಿಯ ಕಿಚ್ಚು, ಭಾರತದ ಏಕತೆ ಹಾಗೂ ಅಖಂಡತೆಯ ಕನಸು ಹೊತ್ತ ಈ ಯುವಕ, ತನ್ನ ಬೈಕ್ ಮೇಲೆ ಸುಮಾರ 12 ಸಾವಿರ ಕಿ.ಮಿ. ಪಾಕಿಸ್ತಾನ ಗಡಿ, ನೇಪಾಳ ಸೇರಿದಂತೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸುಮಾರು ಒಂದು ತಿಂಗಳ ಪ್ರವಾಸ ಯಶಸ್ವಿಯಾಗಿ ಮುಗಿಸಿಕೊಂಡು ವಾಪಸ್ ಆಗಿದ್ದಾರೆ.
ಪಾಕಿಸ್ತಾನದ ಗಡಿಯವರೆಗೆ ಹೋಗಿ ಅಲ್ಲಿ ಕನ್ನಡದ ಧ್ವಜವನ್ನು ಹಾರಿಸುವಾಗ ಹಾಗೂ ಕಾರ್ಗಿಲ್, ಲಡಾಕ್‌ಗಳಿಗೆ ಭೇಟಿ ಕೊಟ್ಟಾಗ ಮೈ-ಮನ ರೊಮಾಂಚನಗೊಂಡಿತೆಂದು ವಿನಯ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಹಿಮಾಲಯದ ಶ್ರೇಣಿಯಲ್ಲಿ ಕೊರೆಯುವ ಚಳಿಯ ನಡುವೆಯೂ ಸಂವರಿಸಿ, ಹಿಡಿದ ಹಠವನ್ನು ಸಾಧಿಸುವ ನಡುವೆಯ ನಿಟ್ಟಿನಲ್ಲಿ ಛಲದಂಕ ಮಲ್ಲನಾಗಿ ಯಾತ್ರೆ ಪೂರೈಸಿದ್ದಾನೆ.
ವಿನಯನ ಸಾಧನೆಗೆ ಸಚಿವ ಆರ್.ಬಿ.ತಿಮಾಪೂರ, ಪ್ರಮುಖರಾದ ಬಸವಂತಣ್ಣ ಕಾಟೆ, ಶಿವಾಜಿ ನಿಗಡೆ, ಆಶೋಕ ಕಂಕಣವಾಡಿ, ಪರಪ್ಪ ಮುಗತಿ, ನಾಡಗೌಡ, ಜೆ.ಬಿ.ಕೋಪಕರ ಹಾಗೂ ಈ ಭಾಗದ ಸಂಘ ಸಂಸ್ಥೆಗಳು, ಗಣ್ಯಮಾನ್ಯರು, ರೈತರು ಸಾಧನೆಯನ್ನು ಬಣ್ಣಿಸಿದ್ದಾರೆ.