ಮುಧೋಳ: ಪ್ರಖರ ಬೇಸಿಗೆಯ ಹಿನ್ನೆಲೆಯಲ್ಲಿ ಘಟಪ್ರಭಾ ನದಿಯು ಬತ್ತಿದ್ದು, ನಗರದ ಅನೇಕ ಬೋರವೆಲ್ಲಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಆದ್ದರಿಂದ ಸಾರ್ವಜನಿಕರು ನೀರನ್ನು ಪೋಲು ಮಾಡದೆ ಹಿತಮಿತವಾಗಿ ಬಳಸಬೇಕೆಂದು ನಗರಸಭೆ ಪೌರಾಯುಕ್ತ ಗೋಪಾಲ ಕಾಸೆ ತಿಳಿಸಿದ್ದಾರೆ. ಕುಡಿಯುವ ನೀರಿಗೆ ತೊಂದರೆಯಾಗದಂತೆ ಎಲ್ಲ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಕದ್ದಿದ್ದಾಳೆ ಎ ಇದಕ್ಕಾಗಿ ನಗರಸಭೆ ಹೆಲ್ಸ್ ಲೈನ್ ಸ್ಥಾಪಿಸಲಾಗಿದೆ. ವಾ.ನಂ.1 ರಿಂದ 15ಕ್ಕೆ ರಾಜು ಚವಾಣ ಇಂಜಿನಿಯರ ಮೊ.ನಂ. 9880598527 ಹಾಗೂ ಎಂ.ಬಿ.ಹೊಸೂರ ಮೊ.ನಂ. 9611663485 ಇವರಿಗೆ ಉಸ್ತುವಾರಿ ವಹಿಸಲಾಗಿದೆ. ಇದಕ್ಕಾಗಿ ಸಿಬ್ಬಂದಿಯಾದ ಜಗನ್ನಾಥ ಕೊಪರ್ಡೆ, ಭಾರತಿರಾವ.ಜಿ., ಕುಮಾರ ಮೇತ್ರಿ, ಹಾಗೂ ವಿಷ್ಣು ಶಿಂಧೆ ಅವರನ್ನು ಸಂಪರ್ಕಿಸಬೇಕೆಂದು ಕಾಸೆ ತಿಳಿಸಿದ್ದಾರೆ.